ಆಸ್ತಿಗಾಗಿ ಮಗನೇ ಅಪ್ಪನನ್ನು ಬ್ಲಾಕ್ ಮೇಲ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪನ ಬಗ್ಗೆಯೇ ಅಶ್ಲೀಲ ಸಂದೇಶಗಳನ್ನು ಹಂಚಿಕೆ ಮಾಡಿದ ವಿಚಿತ್ರ ಘಟನೆ ಮದ್ದೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್, ತನ್ನ ಮಗ ಪ್ರಣವ್ ಎಂಬುವನಿಂದ ಬ್ಲಾಕ್ ಮೇಲ್ ಗೆ ಒಳಗಾಗಿ, ಅಂತಿಮವಾಗಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆರೋಪಿಗಳಾದ ಪ್ರಣಬ್, ಅವನ ಸ್ನೇಹಿತರಾದ ಮಹೇಶ, ಈಶ್ವರ್, ಪ್ರೀತಮ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆನ್ ಲೈನ್ ಗೇಮ್ ಸೇರಿದಂತೆ ಹಲವು ದುಶ್ಚಟಗಳಿಗೆ ದಾಸನಾಗಿರುವ ಪ್ರಣವ್ ಈಗಾಗಲೇ ಕೋಟ್ಯಾಂತರ ರೂ.ಗಳನ್ನು ಕಳೆದುಕೊಂಡಿದ್ದಾನೆ ಎನ್ನಲಾಗಿದೆ.