ಮುಂಬರುವ ಗೌರಿಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ಯರಗೇರಾದಲ್ಲಿ ಸಿಪಿಐ ಎನ್.ಆರ್.ನಿಂಗಪ್ಪ ಅವರು ಪಿಡಿಓ ಅಧಿಕಾರಿಗಳ ಜೊತೆ ಸಭೆ ನಡೆಸಿ ಗಣೇಶ ಚತುರ್ಥಿ ಅಂಗವಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಖಡಕ್ ಸೂಚನೆ ನೀಡಿದರು. ನಿಯಮಾನುಸಾರ ಗಣೇಶ ಪ್ರತಿಷ್ಠಾಪನೆ ಮಾಡುವುದು, ಡಿಜೆ, ಪಟಾಕಿ ನಿಷೇಧ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ತಿಳಿಸಿದರು. ಅಲ್ಲದೇ ರಾಯಚೂರು ತಾಲೂಕಿನ ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಬಂಡ ಗ್ರಾಮದಲ್ಲಿ ಪೊಲೀಸರ ರೂಟ್ ಮಾರ್ಚ್ ನಡೆಸಲಾಯಿತು. ರಾಯಚೂರು ಗ್ರಾಮೀಣ ಠಾಣೆ ಸಿಪಿಐ ಸಾಬಯ್ಯ ನಾಯಕ ಪಿಎಸ್ಐ ಪ್ರಕಾಶ ಡಂಬಳ ಹಾಗೂ ಯಾಪಲದಿನ್ನಿ ಪಿಎಸ್ಐ ಹುಲಿಗೇಶ ಓಂಕಾರಿ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಿ ಹಬ್ಬಾಚರಣೆ ಸಂದರ