ಕೊಳ್ಳೇಗಾಲ ತಾಲೂಕಿನ ಬಸ್ತಿಪುರದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಬೈಕ್ ಮೂಲಕ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೋಳ್ಳೇಗಾಲ ಪೊಲೀಸರು ಬಂಧಿಸಿರುವ ಘಟನೆ ಬಸ್ತೀಪುರ ಬಡಾವಣೆಯ ಹೊರವಲಯದಲ್ಲಿ ನಡೆದಿದೆ. ಬಂಧಿತನನ್ನು ಬಸ್ತೀಪುರ ಬಡಾವಣೆಯ ಕುಮಾರ್ (42) ಎಂದು ಗುರುತಿಸಲಾಗಿದೆ. ಪೊಲೀಸರ ದಾಳಿಯಲ್ಲಿ ಆರೋಪಿಯಿಂದ 360 ಗ್ರಾಂ ಒಣಗಿದ ಗೊಂಡೆ ಮಿಶ್ರಿತ ಗಾಂಜಾ ಹಾಗೂ ಸಾಗಾಣಿಕೆಗೆ ಬಳಸಿದ್ದ ಬೈಕ್ ಅನ್ನು ಜಪ್ತಿ ಮಾಡಲಾಗಿದೆ. ಪೊಲೀಸರ ಪ್ರಕಾರ, ಕುಮಾರ್ ತನ್ನ ಬೈಕ್‌ನಲ್ಲಿ ಅರೇಪಾಳ್ಯ ಗ್ರಾಮದ ಬಳಿ ಅಪರಿಚಿತ ವ್ಯಕ್ತಿಗಳಿಂದ ಗಾಂಜಾ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಬರುವಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನೆಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ