ನಗರದಲ್ಲಿ ನೋಡುಗರ ಗಮನಸೆಳೆದ ಅನಂತ ಪದ್ಮನಾಭ ಗಣೇಶ ಮೂರ್ತಿ ಬಳ್ಳಾರಿಯ ಪಟೇಲ್ ನಗರದ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ವತಿಯಿಂದ 26ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಇಂದು ನೆರವೇರಿತು. ಈ ಬಾರಿ ಮಂಡಳಿಯು ವಿಭಿನ್ನ ವಿನ್ಯಾಸದಲ್ಲಿ ಅನಂತ ಪದ್ಮನಾಭ ಆವತಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು,ಆಗಸ್ಟ್ 27, ಬುಧವಾರ ಮಧ್ಯಾಹ್ನ 3 ಗಂಟೆಗೆ ನಗರದಲ್ಲಿ ನೋಡುಗರ ಗಮನ ಸೆಳೆಯಿತು. ವಿಶಿಷ್ಟ ಆಕೃತಿಯ ಈ ಗಣೇಶ ಮೂರ್ತಿ ಭಕ್ತರಲ್ಲಿ ಕುತೂಹಲ ಮತ್ತು ಆಕರ್ಷಣೆಯ ಕೇಂದ್ರವಾಗಿದೆ.