ಸಾಫ್ಟ್ ಹಿಂದುತ್ವದ ಕಡೆ ಡಿಕೆ ವಾಲುತ್ತಿದ್ದಾರಾ ಎಂಬ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ 7 ಮಿನಿಸ್ಟರ್ ಕ್ವಾಟ್ರಸ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು, ಲಾರ್ಡ್, ಸಾಫ್ಟ್ ಹಿಂದುತ್ವದ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿರುವವರು ನಾರಾಯಣಗುರು, ಕನಕದಾಸ, ಗಾಂಧೀಜಿ ಇವರು ಹಿಂದುತ್ವದ ಬಗ್ಗೆ ನಂಬಿಕೆ, ಪಾಲನೆ ಮಾಡ್ತಿರುವವರು. ಬಿಜೆಪಿಯವರು ನಾತೂರಾಂ ಗೂಡ್ಸೆ, ಸಾವರ್ಕರ್ ಹೆಸರಿನಲ್ಲಿ ರಾಜಕೀಯ ಮಾಡ್ತಿದ್ದಾರೆ. ಫ್ಲೋ ನಲ್ಲಿ ಬಂದಿದೆ ಡಿಸಿಎಂ ಅಂತ ಹೇಳ್ತಿದ್ದಾರೆ ಎಂದರು.