ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮೇಲ್ಛಾವಣಿಯ ಸಿಮೆಂಟ್ ಕಳಚಿಬಿದ್ದಿದ್ದ ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 26 ರ ಬೆಳಗ್ಗೆ 11 ಗಂಟೆಗೆ ಮೇಲ್ಛಾವಣಿಗೆ ಸುಣ್ಣಬಣ್ಣ ಬಳಿದು ತೇಪೆ ಹಾಕುವ ಕಾರ್ಯ ನಡೆದಿದ್ದು, ಕಳಪೆಯಾಗಿ ನಿರ್ವಹಿಸದೆ ಗುಣಮಟ್ಟ ಕಾಮಗಾರಿ ಕೈಗೊಳ್ಳಬೇಕು ಎಂದು ಪ್ರಯಾಣಿಕರಾದ ಪ್ರಹ್ಲಾದ್ ಆಪಾದಿಸಿದರು. ಈ ಕುರಿತು ಮಂಗಳವಾರ ಪ್ರಕಟಣೆ ನೀಡಿದ ಅವರು, ಈಚೆಗೆ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಕಳಚಿಬಿದ್ದ ಘಟನೆಯಿಂದ ಎಚ್ಚೆತ್ತುಕೊಂಡ ಅಧಿಕಾರಿ ಸಿಬ್ಬಂದಿಗಳು ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮೇಲ್ಛಾವಣಿಗೆ ಪ್ಲಾಸ್ಟರ್ ಹಾಕಬೇಕು. ಮತ್ತೆ ಕಳಚಿ ಬೀಳದಂತೆ ಗುಣಮಟ್ಟ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ