ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮಂಗಲ ಗ್ರಾಮದ ಸಮೀಪದ ಕಾಡಂಚಿನ ಜಮೀನೊಂದರಲ್ಲಿ ಒಂದು ಕಾಡಾನೆ ಆಕ್ರಮ ವಿದ್ಯುತ್ ತಗುಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬುಧವಾರ ಸಂಜೆ 4ರಲ್ಲಿ ನಡೆದಿದೆ. ಸ್ಥಳೀಯ ರೈತರು ತಮ್ಮ ಜಮೀನನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ಅಕ್ರಮವಾಗಿ ವಿದ್ಯುತ್ ತಂತಿಗಳನ್ನು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ವೇಳೆ ಕಾಡಾನೆಯೊಂದು ಆಹಾರವನ್ನರಿಸಿ ಜಮೀನಿನೊಳಗೆ ಪ್ರವೇಶಿಸಿದಾಗ ಆಕ್ರಮ ವಿದ್ಯುತ್ ತಂತಿಗೆ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಈ ಘಟನೆ ಬೆನ್ನಲ್ಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ