ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನಾದ್ಯಂತ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ ಎಂದು ಕರವೇ ಪ್ರವೀಣಕುಮಾರ್ ಶೆಟ್ಡಿ ಬಣ ಆರೋಪಿಸಿದೆ. ಈ ಕುರಿತಂತೆ ಕರವೇ ಸೋಮವಾರ ಮಧ್ಯಾನ್ಹ ೧೨ ಗಂಟೆಗೆ ಹಿರೇಕೆರೂರು ತಹಶಿಲ್ದಾರ ಕಚೇರಿಗೆ ಮನವಿ ಸಲ್ಲಿಸಿದೆ. ಆದಷ್ಟು ಬೇಗ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಕರವೇ ಎಚ್ವರಿಕೆ ನೀಡಿದೆ.