ಓದುಗರನ್ನ ಆಕರ್ಷಿಸುವ ಮೌಲ್ಯಾಧಾರಿತ ಕೃತಿಗಳು ಹೊರ ಬರಬೇಕು ಎಂದು ಹಿರಿಯ ಚಿಂತಕರು ಆಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಸಂಜೆ 6ಕ್ಕೆ ಆಯೋಜಿಸಿದ ಓದುವ ಮಂಟಪ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊಸ ಓದು ಅತಿಥಿಯಾಗಿ ಸಾಹಿತಿ ಮಾಣಿಕ ನೇಳಗಿ ಪಾಲ್ಗೊಂಡಿದ್ದರು ಪಾಲ್ಗೊಂಡಿದ್ದರು.