ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಮಾತ್ರ ಬರೆಸಿ: ಬಸವಪರ ಸಂಘಟನೆಗಳ ಮನವಿ ಬಸವಕಲ್ಯಾಣ: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಿಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ತಪ್ಪದೆ ಬರೆಸಬೇಕು ಎಂದು ಬಸವಪರ ಸಂಘಟನೆಗಳ ಪ್ರಮುಖರು ಮನವಿ ಮಾಡಿದರು. ಹುಲಸೂರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ವಿವಿಧ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು, ಸೇ.22ರಿಂದ ಅ.7ರ ವರೆಗೆ ನಡೆಯಲಿರುವ ಸಮಿಕ್ಷೆ ವೇಳೆ ಧರ್ಮದ ಕಾಲಂ ಸಂಖ್ಯೆ 11ರಲ್ಲಿ ಇರುವ ಇತರೆ ಧರ್ಮದ ಕಾಲಂನಲ್ಲಿ ಧರ್ಮ ಲಿಂಗಾಯತ ಎಂದು ಬರೆಸುವ ಜೊತೆಗೆ ಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಉಪ ಜಾತಿಗಳನ್ನು ಬರೆಸಬೇಕು ಎಂದು ಮನವಿ ಮಾಡಿದರು.