ಮುಸ್ಲಿಮರು ದೇಶದ ಐಕ್ಯತೆ ಮತ್ತು ಭದ್ರತೆಗೆ ಎಂದಿಗೂ ಸಿದ್ದರಿದ್ದೇವೆ. ಹಿಂದಿನಿಂದಲೂ ಕೂಡ ಮುಸ್ಲಿಮರು ದೇಶಕ್ಕಾಗಿ ಪ್ರಾಣವನ್ನ ಕೊಟ್ಟಿದ್ದಾರೆ ಎಂದು ಪುರಸಭೆ ಸದಸ್ಯ ದಾದಾಪೀರ್ ತಿಳಿಸಿದರು. ತರೀಕೆರೆ ಪಟ್ಟಣದಲ್ಲಿ ಈದ್ ಮಿಲಾದ್ ಮೆರವಣಿಗೆ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಮುಸ್ಲಿಮರನ್ನ ದೇಶ ವಿರೋಧಿಗಳು ಎಂದು ಬಿಂಬಿಸಲು ನೋಡುತ್ತಿದ್ದರೆ ನಾವೆಲ್ಲರೂ ಕೂಡ ದೇಶದ ಒಳಿತಿಗಾಗಿ ಒಂದಾಗಿರಬೇಕು ಯಾರು ಕೂಡ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಮುಸ್ಲಿಮರು ಎಂದಿಗೂ ಕೂಡ ದೇಶದ ಪರವಾಗಿಯೇ ಇದ್ದಾರೆ ಎಂದು ನಾವು ತೋರಿಸಿಕೊಡಬೇಕು ಎಂದು ಕರೆಕೊಟ್ಟರು.