ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗವಾದ ದಿಂಬಂ ಘಟ್ಟ ಪ್ರದೇಶದ ತಡೆಗೋಡೆ ಮೇಲೆ ಚಿರತೆ ಹಾಯಾಗಿ ಕುಳಿತ ದೃಶ್ಯ ತಡರಾತ್ರಿ ಕಂಡು ಬಂದಿದೆ. ತಮಿಳುನಾಡಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ವೇಳೆ ದಿಂಬಂನ 27ನೇ ತಿರುವಿನ ತಡೆಗೋಡೆ ಮೇಲೆ ಚಿರತೆಯೊಂದು ಹಾಯಾಗಿ ಕುಳಿತಿದ್ದನ್ನು ಕಂಡ ಕಾರು ಚಾಲಕ ವಿಡಿಯೋ ಮಾಡಿದ್ದಾರೆ. ಸಾಕಷ್ಟು ಸಮಯ ಕುಳಿತಿದ್ದ ಚಿರತೆಗೆ ಚಾಲಕನಿಂದ ನಿದ್ರಾಭಂಗವಾದಂತೆ ಆಗಿ ಮನುಷ್ಯರ ಸಹವಾಸವೇ ಸಾಕು ಎಂಬಂತೆ ಮೈ ಮುರಿದು ಕ್ಷಣಾರ್ಧದಲ್ಲೇ ಮಾಯವಾಗಿದೆ.