ಬೂದಿಕೋಟೆಯ ಹಾಲು ಉತ್ಪಾದಕರ ಸಹಕಾರ ಸಂಘ 36 ವರ್ಷಗಳ ಇತಿಹಾಸ ಹೊಂದಿರುವ ಸಂಘವಾಗಿದೆ.ಈ ಸಂಘ ಲಾಭದಾಯಕವಾಗಿ ಸಂಘ 50 ಲಕ್ಷ ಉಳಿತಾಯ ಮಾಡಿದ್ದೀರಿ ಜೊತೆಗೆ ಈ ವರ್ಷದ ಎಲ್ಲಾ ಖರ್ಚು ವೆಚ್ಚಗಳು ಹೋಗಿ ನಿವ್ವಳ ಲಾಭ 24 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡಿರುವುದು ಶ್ಲಾಘನೀಯ ಎಂದು ಒಕ್ಕೂಟದ ನಿರ್ದೇಶಕ ಹಾಗೂ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಬೂದಿಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಲೀಟರ್ ಗೆ ಪ್ರೋತ್ಸಾಹ ಧನವೆಂದು 5 ರೂಪಾಯಿಯನ್ನು ನೀಡುತ್ತಿದ್ದೇವೆ, ಎಂ ವಿ ಕೃಷ್ಣಪ್ಪ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದ್ರು