ಗಂಗಾವತಿ ನಗರದಲ್ಲಿನ ಕನಕಗಿರಿ ರಸ್ತೆಯಲ್ಲಿರುವ ಗೋದಾಮೊಂದರಲ್ಲಿ ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಣೆ ಮಾಡಿ ಲೋಡ್ ಆಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಗಂಗಾವತಿ ತಾಲೂಕ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟೇಶ ಬಾಬು ನೇತೃತ್ವದ ಸಮಿತಿ ಸದಸ್ಯರು ಪರಿಶೀಲಿಸಲು ತೆರಳಿದಾಗ ಈ ಘಟನೆ ಬಯಲಾಗಿದೆ. ಲಾರಿಯಲ್ಲಿ ಸುಮಾರು 500ಕ್ಕೂ ಅಧಿಕ ಸುಮಾರು 50 ಕೆಜಿ ಚೀಲಗಳು (ಅಂದಾಜು 275 ಕ್ವಿಂಟಲ್) ಲೋಡ್ ಮಾಡಲಾಗಿ ಇನ್ನುಳಿದ ಸುಮಾರು 500 ಚೀಲ ಗೋಡಾನ್ ನಲ್ಲಿ ಪ್ಲಾಸ್ಟಿಕ್ ಚೀಲಕ್ಕೆ ಬದಲಾಯಿಸುತಿದ್ದದನ್ನು ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಡಾ.ವೆಂಕಟೇಶ ಬಾಬು.ಆಗಸ್ಟ್ 26 ರಂದು ಮಧ್ಯಾಹ್ನ 2-30 ಗಂಟೆಗೆ ಮಾಹಿತಿ ನೀಡಿದ್ದಾರೆ.