ಹಾಸನ ಜಿಲ್ಲೆಯ ಸಕಲೇಶಪುರದ ಬಾಳೆಗದ್ದೆ ನಿವಾಸಿ ಹಯಾತ್ ಖಾನ್ ಸಕಲೇಶಪುರದ ಹಳೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಅಡ್ಡಾದಿಡ್ಡಿ ಅಂಗಡಿಯನ್ನು ಹಾಕಿಕೊಂಡು ತರಕಾರಿ ಮತ್ತು ಸೊಪ್ಪು ಮಾರಾಟಮಾಡುತ್ತಿದ್ದು ಇದರ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಕಲೇಶಪುರದ ಸಿಜೆಎಂ& ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ. ನ್ಯಾಯಾಲಯ ಹಯಾತ್ ಖಾನ್ ಎಂಬ ವ್ಯಕ್ತಿಗೆ ದಂಡದ ರೂಪವಾಗಿ 4 ದಿನಗಳ ಕಾಲ ಪ್ರತಿದಿನ 2 ಗಂಟೆಗಳ ಕಾಲ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕಸ ಗುಡಿಸುವುದು ಮತ್ತು ಸ್ವಚ್ಚ