ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ತಡರಾತ್ರಿ ಸುರಿದ ಮಳೆಗೆ ತೇವಾಂಶಗೊಂಡಿದ್ದ ಮನೆಯೊಂದು ಕುಸಿದ ಘಟನೆ ಚಿತ್ತಾಪುರ ತಾಲೂಕಿನ ಸುಗೂರು(ಎನ್) ಗ್ರಾಮದಲ್ಲಿ ನಡೆದಿದ್ದು, ಸೆ23 ರಂದು ಬೆಳಗ್ಗೆ 11 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಗ್ರಾಮದ ಉಮಾದೇವಿ ಮಠಪತಿ ಎಂಬುವರಿಗೆ ಸೇರಿದ ಮನೆ ತಡರಾತ್ರಿ ನೆಲಕ್ಕುರುಳಿದ್ದು, ಗೋಡೆ ಕುಸಿತದ ಶಬ್ದ ಕೇಳಿ ಮನೆಯಲ್ಲಿದ್ದ ಮೂವರು ಹೊರಗೆ ಓಡೋಡಿ ಬಂದಿದ್ದಾರೆ.. ಇನ್ನೂ ಕೂದಲೆಳೆಯಲ್ಲಿ ಮೂವರು ಪಾರಾಗಿದ್ದಾರೆ.. ಅಧಿಕಾರಿಗಳು ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.