ಹೊಳೆನರಸೀಪುರ :ತಾಲೂಕಿನ ಹರಳಹಳ್ಳಿ ಗ್ರಾಮದ ಬಳಿ ಹೇಮಾವತಿ ಎಡದಂಡೆ ನಾಲೆಗೆ ಕಾರು ಬಿದ್ದ ದಾರುಣ ಘಟನೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಹರಳಹಳ್ಳಿ ಗ್ರಾಮದ ಸಮೀಪದ ಹೇಮಾವತಿ ಎಡದಂಡೆ ನಾಲೆಗೆ ಕಾರು ಒಂದು ಆಕಸ್ಮಿಕವಾಗಿ ಬಿದ್ದಿದೆ ಎಂದು ಶಂಕಿಸಲಾಗಿದೆ. ಸ್ಥಳೀಯರು ಕಾರಿನ ಹಿಂಭಾಗವನ್ನು ನಾಲೆಯಲ್ಲಿ ಕಂಡು, ತಕ್ಷಣವೇ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಕಾರನ್ನು ನಾಲೆಯಿಂದ ಮೇಲಕ್ಕೆ ಎತ್ತಿದ್ದಾರೆ. ಠಾಣೆಯ ಹೊಳೆನರಸೀಪುರ ನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ