ಬೆಂಗಳೂರಿನ ವಿಕಾಶಸೌಧದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ, ಮಹಾಲಯ ಅಮಾವಾಸ್ಯೆ, ದಸರಾ ಹಾಗೂ ಕಾರ್ತಿಕ ಸೋಮವಾರದಂದು ನಡೆಯುವ ವಿಶೇಷ ಜಾತ್ರೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ನೇತೃತ್ವದಲ್ಲಿ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು. ಸಭೆಯಲ್ಲಿ ಹೈಟೆಕ್ ದಾಸೋಹ ನಿರ್ಮಾಣ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಾಲೂರು ಮಠದ ಶ್ರೀಗಳಾದ ಡಾ.ಶಾಂತಮಲ್ಲೊಕಾರ್ಜುನ ಸ್ವಾಮೀಜಿ, ಶಾಸಕ ಮಂಜುನಾಥ್ ಹಾಗೂ ಇತರರು ಇದ್ದರು