ಇಂದು ಕೊಪ್ಪಳ ನಗರದಲ್ಲಿ ಫೈರೋಜ್ ಇಮ್ರಾನ್ ಹಾಗೂ ಸಾಧಿಕ್ ಖಾಲಿದ್ ಅವರು ಆರಂಭಿಸಿದ ಯುನಿಕ್ ಗ್ರೀನ್ ಟರ್ಫ್ ಕ್ರೀಡಾಂಗಣ ಉದ್ಘಾಟನೆಯನ್ನು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು. ಸೆಪ್ಟೆಂಬರ್ 07 ರಂದು ಮಧ್ಯಾಹ್ನ 3-30 ಗಂಟೆಗೆ ಚಾಲನೆ ಗೊಳಿಸಿ ಮಾತನಾಡಿ ಈ ಕ್ರೀಡಾಂಗಣವು ಯುವಕರಲ್ಲಿ ಕ್ರೀಡಾಸ್ಪೂರ್ತಿಯನ್ನು ಬೆಳೆಸಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕೊಪ್ಪಳ ನಗರ ಸಭೆಯ ಅಧ್ಯಕ್ಷ ಅಮ್ಜದ್ ಪಟೇಲ ಸೇರಿದಂತೆ ಹಲವರು ಉಪಸ್ಥಿತರಿದ್ದರು