ಕೋಮರನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ ಚಂದ್ರಪ್ಪ ಚಾಲನೆ ನೀಡಿದ್ದಾರೆ. ಬಾನುವಾರ ಮಧ್ಯಾಹ್ನ 12 ಗಂಟೆಗೆ ಹೊಳಲ್ಕೆರೆ ತಾಲ್ಲೂಕಿನ ಕೋಮರನಹಳ್ಳಿ ಗ್ರಾಮದಲ್ಲಿ ₹2. 20 ಕೋಟಿ ವೆಚ್ಚದಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣದ ಕಾಮಗಾರಿ, ಕೋಮರನಹಳ್ಳಿಯಿಂದ ತೇಕಲವಟ್ಟಿ ವರೆಗೂ ನೂತನ ಡಾಂಬರ್ ರಸ್ತೆ ನಿರ್ಮಾಣದ ಕಾಮಗಾರಿ ಮತ್ತು ಕೋಮರನಹಳ್ಳಿ ಗ್ರಾಮದಲ್ಲಿ ನೂತನ ಸಿ.ಸಿ ರಸ್ತೆ ನಿರ್ಮಾಣದ ಕಾಮಗಾರಿಗೆ ಇಂದು ಭೂಮಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದ್ದಾರೆ