ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 26ರ ಸಂಜೆ 5ಗಂಟೆಗೆ ಉದ್ಯಾನ್ ಎಕ್ಸಪ್ರೆಸ್ ಹಿಂದಿನ ಜನರಲ್ ಭೋಗಿಯ ಟಾಯಲೆಟ್ ರೂಮ್ ಒಳಗಡೆ ಸುಮಾರು 02 ರಿಂದ 03 ದಿನದ ಅಪರಿಚಿತ ನವಜಾತ ಹೆಣ್ಣು ಶಿಶುವನ್ನು ಯಾರೋ ಬಿಟ್ಟು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಆಗಸ್ಟ್ 28 ರ ಗುರುವಾರ ಸಂಜೆ ವಾರಸುದಾರರ ಪತ್ತೆಗೆ ಕೋರಿದ್ದಾರೆ. ಮಗುವನ್ನು ನೋಡಿದ ದೂರುದಾರರು ಚಿಕಿತ್ಸೆ ಕುರಿತು ರಾಯಚೂರಿನ ರಿಮ್ಸ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿರುತ್ತದೆ. ಈ ಮೃತ ಮಗುವಿನ ಹೋಲಿಕೆಯ ಮಗು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸರ ಸಂಪರ್ಕಿಸಲು ಕೋರಿದ್ದಾರೆ.