ಕುಡಿಯಲು ಹಣ ನೀಡದ ಹಿನ್ನಲೆ ಮನೆಗೆ ಬೆಂಕಿ ಹಚ್ಚಿದ ಭೂಪ ಪೊಲೀಸರ ಅತಿಥಿಯಾಗಿದ್ದಾನೆ.ಮೈಸೂರಿನ ರಮ್ಮನಹಳ್ಳಿಯಲ್ಲಿ ಘಟನೆ ನಡೆದಿದೆ.ಬೆಂಕಿ ಹಚ್ಚಿ ಪರಾರಿಯಾಗಿದ್ದ ಭೂಪನನ್ನ ಎನ್.ಆರ್.ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವಪ್ರಸಾದ್ (26) ಮನೆಗೆ ಬೆಂಕಿ ಹಚ್ಚಿ ಪೊಲೀಸರ ಅತಿಥಿಯಾದ ಭೂಪ.ಹೆತ್ತ ತಾಯಿ ಕಲಾವತಿ ರವರು ರಮ್ಮನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.ಪತಿ ಎರಡನೇ ಮದುವೆ ಮಾಡಿಕೊಂಡು ಪ್ರತ್ಯೇಕ ಸಂಸಾರ ನಡೆಸುತ್ತಿದ್ದಾರೆ.ಕಲಾವತಿಗೆ ಇಬ್ಬರು ಮಕ್ಕಳು ಎರಡನೆ ಮಗ ಶಿವಪ್ರಸಾದ್.ಕುಡಿತದ ಚಟಕ್ಕೆ ದಾಸನಾಗಿದ್ದ ಶಿವಪ್ರಸಾದ್ ಆಗಾಗ ತಾಯಿಗೆ ಕಿರುಕುಳ ನೀಡಿ ಹಣ ಕಿತ್ತುಕೊಂಡು ಹೋಗುತ್ತಿದ್ದ.ಎರಡು ದಿನಗಳ ಹಿಂದೆ ಶಿವಪ್ರಸಾಸ್ ಕುಡಿಯಲು ಹಣ ಕೇಳಿದ್ದಾನೆ.ಕಲಾವತಿ ರವರು ಹಣ ನೀಡಲ್ಲ