ಹಿಂದೂ ಮಹಾಗಣಪತಿ, ಸುದರ್ಶನ ಚಕ್ರ ಯುವ ಮಂಡಳ ವತಿಯಿಂದ ಸೆ. 12ರಂದು 'ಜಾಗೋ ಹಿಂದೂಸ್ಥಾನಿ ಸಂಗೀತ' ಕಾರ್ಯಕ್ರಮ ಹಾಗೂ ಧರ್ಮಸಭೆ ನಡೆಯಲಿದೆ ಎಂದು ಹಿಂದೂ ಮುಖಂಡ ಶ್ರೀಕಾಂತ ಖಟವಟೆ ಹೇಳಿದರು. ಹಿಂದೂ ಮಹಾಗಣಪತಿ ಮಂಡಳದಿಂದ ನಡೆಯುತ್ತಿರುವ ಗಣೇಶ ಉತ್ಸವವು ವಿಜೃಂಭಣೆಯಿಂದ ಜರುಗುತ್ತಿದ್ದು, ಇತ್ತೀಚೆಗೆ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ಸಾವಿರಾರು ಭಕ್ತರ ಗಮನ ಸೆಳೆದಿದೆ ಎಂದರು.