ಮಾನ್ಯ ಉಪ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರ ನಿರ್ದೇಶನದಂತೆ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರು ರವರ ನೇತೃತ್ವದಲ್ಲಿ ಪಾಲಿಕೆ ವತಿಯಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಹಾಗೂ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ನಾಗರೀಕರಿಗೆ ಸುರಕ್ಷಿತ ರಸ್ತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಲಯ ಆಯುಕ್ತರಾದ ರಮೇಶ್ ರವರ ನೇತೃತ್ವದಲ್ಲಿ ವಲಯದ ಹೊರಮಾವು ರಸ್ತೆ, ಕಾರ್ಮೆಲರನ್ ರಸ್ತೆ, ಕುಂದಲಹಳ್ಳಿ, ಬ್ರೂಕ್ ಫೀಲ್ಡ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ರಸ್ತೆ ಗುಂಡಿ ಮುಚ್ಚಲಾಯಿತು.