Download Now Banner

This browser does not support the video element.

ಶಿರಸಿ: ಸ್ಥಗಿತಗೊಂಡಿದ್ದ ದಾಂಡೇಲಿ - ಅಳ್ನಾವರ ರೈಲು ಸಂಚಾರ ಪುನರಾರಂಭ : ನಗರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

Sirsi, Uttara Kannada | Sep 25, 2025
ಶಿರಸಿ : ಸ್ಥಗಿತಗೊಂಡಿದ್ದ ದಾಂಡೇಲಿ - ಅಳ್ನಾವರ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಅವರು ಶಿರಸಿ ನಗರದಲ್ಲಿ ಇಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಕೊರೋನಾ‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ದಾಂಡೇಲಿ - ಅಳ್ನಾವರ ರೈಲ್ವೆ ಸಂಚಾರದ ಕುರಿತಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ಸಚಿವ ‌ವಿ. ಸೋಮಣ್ಣ ಅವರಲ್ಲಿ ಚರ್ಚಿಸಿ, ಮನವರಿಕೆ ಮಾಡಲಾಗಿತ್ತು. ಉತ್ತರ ಕನ್ನಡದ ಘಟ್ಟದ ಮೇಲ್ಭಾಗದಲ್ಲಿ ಇದ್ದ ಏಕೈಕ ರೈಲ್ವೆ ನಿಂತಿತ್ತು‌. ಇದೀಗ ಮರಳಿ ಆರಂಭಿಸಲು ಅಗತ್ಯ ಕ್ರಮ ಕೈಗೊಂಡಿರುವುದು ಸಂತಸ ತಂದಿದೆ. ಆ ಭಾಗದ ಜನರ ಬಹುಕಾಲದ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸಿದೆ ಎಂದರು.
Read More News
T & CPrivacy PolicyContact Us