ಹಿಂದೂ ಮಹಾ ಗಣಪತಿ ಬೃಹತ್ ಶೋಭಾಯಾತ್ರೆ ಶನಿವಾರ ರಾತ್ರಿ 11 ಗಂಟೆಗೆ ಮುಕ್ತಾಯವಾಗಿದೆ. ಶೋಭಾಯಾತ್ರೆ ಸಂಪನ್ನಗೊಂಡ ಹಿನ್ನೆಲೆ, ಗಣೇಶ ವಿಸರ್ಜನೆ ಕೂಡಾ ಮಾಡಲಾಗಿದೆ. ಚಿತ್ರದುರ್ಗ ನಗರದ ಚಂದ್ರವಳ್ಳಿ ತೋಟದ ಬಾವಿಯಲ್ಲಿ ವಿಸರ್ಜನೆ ಮಾಡಲಾಗಿದೆ. ಗಣೇಶ ವಿಸರ್ಜನೆ ಹಿನ್ನೆಲೆ ಬಾವಿಗೆ ವಿಶೇಷ ಅಲಂಕಾರ ಕೂಡಾ ಮಾಡಲಾಗಿತ್ತು. ಬಾಳೆ ದಿಂಡು ಕಟ್ಟಿ, ಹೂಹಾರ ಹಾಕಿ ಅಲಂಕಾರ ಮಾಡಲಾಗಿತ್ತು. ಬಾವಿಯ ಕಟ್ಟೆಯ ಮೇಲೆ ಗೌರಿ ಗಣೇಶ ಮೂರ್ತಿಗಳನ್ನಿಟ್ಟು ಪೂಜೆ ಕೂಡಾ ಸಲ್ಲಿಸಿದರು. ಬೃಹತ್ ಕ್ರೇನ್ ಮೂಲಕ ಗಣೇಶ ಮೂರ್ತಿ ಇಳಿಸಿ ವಿಸರ್ಜನೆ ಮಾಡಲಾಯ್ತು. ವಿಸರ್ಜನಾ ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಶ್ರೀ, ಭಜರಂಗದಳದ ಪ್ರಮುಕ ಪ್ರಭಂಜನ್, ಕಮಿಟಿ ಸದಸ್ಯ ಬದ್ರಿನಾಥ, ಸಿದ್ಧಾರ್ಥ ಗುಂಡಾರ್ಪಿ, ಜಿ.ಎಂ. ಅನೀತ ಸೇರಿ