ವೈಭವ್ ರಿಫೈನರ್ ಎಂಬ ಹೆಸರಿನ ಅಂಗಡಿಗೆ ನಕಲಿ ಬೀಗದ ಸಹಾಯದಿಂದ ಕಳ್ಳರು ನುಗಿದು ಡ್ರಾಯರ್ನ ಬೀಗವನ್ನು ಮುರಿದು ಸುಮಾರು 600 ಗ್ರಾಂ ತೂಕದ ಚಿನ್ನದ ಗಟ್ಟಿ,ಗೋಲ್ಡ್ ಲಿಕ್ವಿಡ್ ಸೇರಿದಂತೆ ಅಂದಾಜು 60 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಜ್ಯುವೆಲರಿ ಶಾಪ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.