ಸಮಸ್ತ ಸಂಘಟನೆಗಳ ಇಷ್ಕೇ ರಸೂಲ್ ಮೀಲಾದ್ ಸ್ವಾಗತ ಸಮಿತಿ ವತಿಯಿಂದ ಇಷ್ಕೇ ರಸೂಲ್ ಕಾರ್ಯಕ್ರಮ ಹಾಗೂ ಗ್ರ್ಯಾಂಡ್ ಮೀಲಾದ್ ಜಾಥಾವನ್ನು ನಡೆಸಲಿದೆ. ದಿನಾಂಕ ಸೆಪ್ಟೆಂಬರ್ 09 ರಂದು ಮಂಗಳೂರಿನ ಪುರಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಕ್ಕೆ ಸರಿಯಾಗಿ ಬಾವುಟ ಗುಡ್ಡೆಯಿಂದ ಆರಂಭಗೊಂಡ ಮೀಲಾದ್ ಜಾಥಾ ಜ್ಯೋತಿ ಸರ್ಕಲ್ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಪುರಭವನ ತಲುಪಲಿದೆ ಎಂದು ಸಂಚಾಲಕ ಅಬ್ದುಲ್ ಅಝೀಝ್ ದಾರಿಮಿ ಇಂದು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.