ಯಾದಗಿರಿ ತಾಲೂಕಿನ ಸೈದಾಪುರ ಬಳಿಯ ಬಳಿಚಕ್ರ ಗ್ರಾಮದ ಬಡಾವಣೆ ಒಂದಕ್ಕೆ ಮಳೆ ನೀರು ನುಗ್ಗಿ, ದೊಡ್ಡ ಮಟ್ಟದ ಅವಾಂತರವನ್ನು ಸೃಷ್ಟಿಸಿದೆ. ಬಡಾವಣೆಯಲ್ಲಿರುವ ಸುಮಾರು 40 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ಎಲ್ಲ ವಸ್ತುಗಳು ದವಸ, ಧಾನ್ಯ ನೀರಲ್ಲಿ ನೆನೆದು ಹಾಳಾಗಿವೆ.ಇದರಿಂದಾಗಿ ಕುಟುಂಬಸ್ಥರು ಮನೆಗಳನ್ನು ತೊರೆದು ಶಾಲೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಘಟನಾ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಬೇಟೆ ನೀಡಿ ಕೂಡಲೇ ನೀರು ತೆರವುಗೊಳಿಸುವಂತಹ ಕಾರ್ಯ ಮಾಡಿ ಕುಟುಂಬಗಳಿಗೆ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಯಾದಗಿರಿ ರಾಯಚೂರು ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.