ಅನಾರೋಗ್ಯದಿಂದ ಬಳಲುತ್ತಿದ್ದ ಬಾಗಲಕೋಟೆ ಜಿಲ್ಲೆಯ ಶಿರೂರ ಗ್ರಾಮದ ಯೋಧ ಸಾವನ್ನಪ್ಪಿದ್ದಾರೆ.ಮೃತ ಯೋಧನನ್ನ ರಮೇಶ್ ಬಾದಾಮಿ (43) ಎಂದು ಗುರ್ತಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಬಿ.ಎಸ್ ಎಫ್ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ,ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ರು.ಕಳೆದ ಸೆ.9.ರಂದು ಮೃತಪಟ್ಟಿದ್ದು, ಶ್ರೀನಗರದಿಂದ ಯೋಧನ ಪಾರ್ಥಿವ ಶರೀರವನ್ನ ಶಿರೂರ ಗ್ರಾಮಕ್ಕೆ ತರಲಾಗುತ್ತಿದೆ.ಇಂದು ಸಂಜೆ ಹೊತ್ತಿಗೆ ಸ್ವಗ್ರಾಮ ಶಿರೂರಗೆ ಪಾರ್ಥಿವ ಶರೀರ ಅಗಮಿಸಲಿದ್ದು,ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.