Download Now Banner

This browser does not support the video element.

ಕೋಲಾರ: ಕೋಲಾರದ ಜಿಲ್ಲಾಸ್ಪತ್ರೆಯ ಜೀವರಕ್ಷಕ 40 ವೆಂಟಿಲೇಟರ್ ನಾಪತ್ತೆ:ನಗರದಲ್ಲಿ‌ ಸಾಮಾಜಿಕ‌ ಕಾರ್ಯಕರ್ತ ಪುಟ್ಟರಾಜು

Kolar, Kolar | Sep 12, 2025
ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಯ ಕರ್ಮಕಾಂಡಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಜಿಲ್ಲಾಸ್ಪತ್ರೆಯ ಜೀವರಕ್ಷಕ 40 ವೆಂಟಿಲೇಟರ್ ನಾಪತ್ತೆಯಾಗಿವೆ.ಸುಮಾರು 3 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ವೆಂಟಿಲೇಟರ್ ಗಳು ಮಾಯವಾಗಿದ್ದು,ಆಸ್ಪತ್ರೆಯ ಗೋದಾಮಿನಲ್ಲಿ ಸುಮಾರು 20 ವೆಂಟಿಲೇಟರ್ ಗಳು ಕೊಳೆಯುತ್ತಿವೆ.ನಾಪತ್ತೆಯಾದ 40 ವೆಂಟಿಲೇಟರ್ ಕೋಲಾರದ ಖಾಸಗಿ ಆಸ್ಪತ್ರೆಗಳಲ್ಲಿರುವ ಶಂಕೆ ವ್ಯಕ್ತವಾಗಿದೆ.ಈ ಕುರಿತು ಸಾಮಾಜಿಕ ಕಾರ್ಯಕರ್ತ ಪುಟ್ಟರಾಜು ಗುರುವಾರ ಪ್ರತಿಕ್ರಯಿಸಿ ಕೋವಿಡ್-19 ರ ಸಮಯದಲ್ಲಿ ಜಿಲ್ಲಾಸ್ಪತ್ರೆಗೆ ಟಾಟಾ ಕಂಪೆನಿ 5 ಕೋಟಿಗೂ ಅಧಿಕ ಮೌಲ್ಯದ 70 ವೆಂಟಿಲೇಟರ್ ಗಳು ದೇಣಿಗೆಯಾಗಿ ಕೊಟ್ಟಿದ್ದವು. ನಾಪತ್ತೆಯಾದ ವೆಂಟಿಲೇಟರ್ ಗಳ ಬಗ್ಗೆ ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೆ‌ ಮಾಹಿತಿಯೆ ಇಲ್ಲ ಎಂದ್ರು
Read More News
T & CPrivacy PolicyContact Us