ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸಾಮರಸ್ಯ ಮೆರೆದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಮ್ಮ ಮನೆಯಲ್ಲಿ ಗಣೇಶ ಮೂರ್ತಿಯನ್ನು ಈ ವರ್ಷವೂ ಪ್ರತಿಷ್ಠಾಪಿಸಿದರು ಇದಕ್ಕೂ ಮುನ್ನ ಬೆಳಗಾವಿ ಚೆನ್ನಮ್ಮ ವೃತ್ತದ ಗಣೇಶ ಮಂದಿರದಲ್ಲಿ ಡಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಮ್ಮ ಕೈಯಲ್ಲಿ ಗಣಪನನ್ನು ಹಿಡಿದುಕೊಂಡು ಮನೆಯವರೆಗೆ ಸಾಗಿ ಬಳಿಕ ಪ್ರತಿಷ್ಟಾಪನೆ ಮಾಡಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಸಾಮರಸ್ಯಕ್ಕೆ ಎಲ್ಲೆಡೆಯೂ ಇಂದು ಬುಧುವಾರ 6 ಗಂಟೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.