ಸೋಲೂರು ಹೋಬಳಿಯನ್ನ ಮಾಗಡಿ ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ನನ್ನಿಂದ ಹಾಗಿಲ್ಲ ಹಾಗಾಗಿ ಅಲ್ಲಿನ ಜನರೇ ಉಳಿಸಿಕೊಳ್ಳಬೇಕೆಂದು ಶಾಸಕ ಬಾಲಕೃಷ್ಣ ತಿಳಿಸಿದರು. ಮಾಗಡಿ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾನು ಈ ಹಿಂದೆ ಇದೆ ವಿಚಾರವಾಗಿ ಹೋರಾಟ ಮಾಡಿದ್ದೆ ಆದರೆ ಯಾರು ಈ ನನಗೆ ಬೆಂಬಲ ಕೊಡಲಿಲ್ಲ, ನೆಲಮಂಗಲ ಕ್ಷೇತ್ರಕ್ಕೆ ಸೋಲೂರು ಹೋಬಳಿ ಸೇರಿಕೊಳ್ಳುತ್ತಿದೆ ಹಾಗಾಗಿ ಅಲ್ಲಿನ ಜನರೇ ಹೋರಾಟವನ್ನ ಮಾಡ್ಕೊಂಡು ಪಡುಕೋಬೇಕು ಅಂತ ಹೇಳಿ ತಿಳಿಸಿದರು.