ಮಳವಳ್ಳಿ : ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿ ಎರಡು ಮೇಕೆಗಳನ್ನು ಕೊಂದು ಹಾಕಿರುವ ಘಟನೆ ತಾಲ್ಲೂಕಿನ ಲಿಂಗಪಟ್ಟಣ ಗ್ರಾಮದಲ್ಲಿ ಜರುಗಿದೆ ಮಂಗಳವಾರ ಮುಸುಕಿನ ಜಾವ 4.30 ರ ಸಮಯದಲ್ಲಿ ಗ್ರಾಮದ ರೈತ ರಮೇಶ್ ಕೊಟ್ಟಿಗೆಗೆ ನುಗ್ಗಿರುವ ಚಿರತೆ ಎರಡು ಮೇಕೆಗಳನ್ನು ಕೊಂದು ಹಾಕಿದ್ದು ಉಳಿದ ಮೇಕೆಗಳ ಮೇಲೂ ದಾಳಿ ಮಾಡಿ ಗಾಯಗೊಳಿಸಿದೆ ಎಂದು ವರದಿಯಾಗಿದೆ. ಕುರಿ ಮೇಕೆಗಳ ಚೀರಾಟ ಕೇಳಿ ಮನೆಯವರು ಹೊರಗೆ ಬಂದು ನೋಡಿದಾಗ ಚಿರತೆ ಮೇಕೆಗಳನ್ನು ಬಿಟ್ಟು ಓಡಿ ಹೋಗಿದೆ. 40 ಸಾವಿರ ರೂ ಬೆಲೆಯ ಮೇಕೆಗಳನ್ನು ಕಳೆದು ಕೊಂಡಿರುವ ರಮೇಶ್ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.