ಮದ್ದೂರು ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ಪೂರ್ವನಿಯೋಜಿತ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಸೋಮವಾರ ಸಂಜೆ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆರವಣಿಗೆ ವೇಳೆ ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ವಿಚಾರಣೆ ನಡೆಸಿ 21 ಜನರನ್ನು ಬಂಧಿಸಲಾಗಿದೆ ಎಂದರು. ಘಟನೆ ನಡೆದ ತಕ್ಷಣ ಇಷ್ಟು ಬೇಗ ಕ್ರಮ ತೆಗೆದುಕೊಂಡ ಪ್ರಕರಣ ಬೇರೆ ಯಾವುದು ಇಲ್ಲ. ಆದರೂ ಕೆಲವರು ಜನರ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜಿಪಿ, ಜೆಡಿಎಸ್ ನೇತೃತ್ವದ ಪ್ರತಿಭಟನೆ ಕುರಿತು ಬೇಸರ ವ್ಯಕ್ತಪಡಿಸಿದರು. ಮದ್ದೂರಿನಲ್ಲಿ ಈ ಹಿಂದೆ ಈ ರೀತಿಯ ಗಲಭೆ ನಡೆದಿರಲಿಲ್ಲ, ಹೊರಗಿನಿಂದ ಬಂದವರು ಯಾರೋ ಗಲಭೆ ನಡೆಸಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದರು.