ಪರಿಶುದ್ಧ ಮನಸ್ಸಿನಿಂದ ಕೂಡಿದ ಭಕ್ತಿಯಿಂದ ಬದುಕಿನಲ್ಲಿ ಸಂತೃಪ್ತಿ ಸಿಗಲು ಸಾಧ್ಯ ಎಂದು ಹಿರೇಮಠದ ಪೀಠಾಧಿಪತಿ ಪೂಜ್ಯ ವೀರರೇಣುಕ ಗಂಗಾಧರ ಮಹಾಸ್ವಾಮಿಜಿ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಬೆಳಿಗ್ಗೆ 11 21ಕ್ಕೆ ನಡೆದ ಸಾಯಿಬಾಬಾ ಮತ್ತು ಪಂಚಮುಖಿ ಹನುಮಾನ್ ದೇವಸ್ಥಾನದ ಕಳಸಾರೋಹಣ ನೆರವೇರಿಸಿ, ಆಶೀರ್ವಚನ ನೀಡಿದರು. ಧಾರವಾಡದ ಪಂಡಿತ್ ಸಂತೋಷ್ ಭಟ್, ದೇವಸ್ಥಾನ ಸಮಿತಿ ಅಧ್ಯಕ್ಷ ವಿನೋದ್ ಜಾಜಿ ಮಾತನಾಡಿದರು.