ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ರವರು ಪೊಲೀಸ್ ಇಲಾಖೆಗೆ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಲು ಶಾಸಕರ ನಿಧಿಯಿಂದ ಸುಮಾರು ₹25 ಲಕ್ಷ ಅನುದಾನ ನೀಡಲು ಮುಂದಾಗಿದ್ದಾರೆ. ಹನೂರು ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಶಾಸಕ ಮಂಜುನಾಥ್ ಅವರನ್ನು ಭೇಟಿ ಮಾಡಿದ ಪೊಲೀಸ್ ಅಧಿಕಾರಿಗಳು, ತಾಲ್ಲೂಕಿನ ಪೊಲೀಸ್ ಠಾಣೆಗಳಲ್ಲಿ ವಾಹನಗಳ ಕೊರತೆ ಬಗ್ಗೆ ಮಾಹಿತಿ ನೀಡಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ತಕ್ಷಣವೇ ಅನುದಾನ ಒದಗಿಸಲು ಒಪ್ಪಿದರು. ಅನುದಾನ ಘೋಷಣೆಯ ನಂತರ, ಹನೂರು ತಾಲೂಕು ಕೇಂದ್ರದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿಟಿ ಕವಿತಾ ಹಾಗೂ ಡಿವೈಎಸ್ ಪಿ ಧರ್ಮೇಂದ್ರ ರವರು ಶಾಸಕರನ್ನು ಭೇಟಿ ಮಾಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.