ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿ ಗಲಬೆಯಲ್ಲಿ ಪಾಲ್ಗೊಂಡಿದ್ದವರನ್ನು ಕ್ಯಾಬಿನೆಟ್ ನಲ್ಲಿ ನಿರ್ಧರಿಸಿ ಕೇಸು ವಾಪಸ್ ಪಡೆದಿದ್ದಾರೆ.ಆದರೆ ಹಿಂದೂಗಳ ಪರವಾಗಿ ಹಾಗೂ ರಕ್ಷಣೆಗೆ ನಿಂತ ಸಿ.ಟಿ.ರವಿ ವಿರುದ್ಧ ಕೇಸು ಹಾಕ್ತಾರೆ. ಸದಾ ಶಾಂತಿಪ್ರಿಯ ಎನ್ನುವ ಮುಖ್ಯಮಂತ್ರಿಗಳು ಗಲಭೆ ಮಾಡಿದವರ ರಕ್ಷಣೆಗೆ ನಿಲ್ತಾರೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಆರೋಪಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ದುಷ್ಟ ಕೂಟಗಳ ವಿರುದ್ಧ ನಾವು ನಿಲ್ಲಬೇಕಿದೆ.ಕೆಲಸ ಮತ್ತು ದೆಹಲಿಯಲ್ಲಿ ಸಭೆ ಸೇರಿದ್ದಾರೆ. ಹಿಂದುಗಳನ್ನ ಹಿಂದುಳಿದವರನ್ನು ಒಡೆಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.