ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಮಾಡಿದ ಪಂಚಮಸಾಲಿ ಟ್ರಸ್ಟ್ ಕಮೀಟಿ ನಿರ್ಣಯದ ವಿರುದ್ಧ, ಕೂಡಲಸಂಗಮದಲ್ಲಿ ಕರೆಯಲಾಗಿದ್ದ ಖಂಡಾನಾ ಸಭೆಗೆ ಶ್ರೀಗಳು ಭಾಗವಹಿಸಿದ್ರು. ಭಕ್ತರು ಹಾಗೂ ಸ್ವಾಮೀಜಿಗಳ ಸಭೆಯಲ್ಲಿ ಶಾಸಕ ಕಾಶಪ್ಪನವರ್ ನಡೆ ವಿರುದ್ಧ ಭಕ್ತ ವಲಯದಲ್ಲಿ ಆಕ್ರೋಶ ವ್ಯಕ್ತವಾಯಿತು. ಸಭೆ ಬಳಿಕ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಮ್ಮನ್ನ ಉಚ್ಚಾಟನೆ ಮಾಡುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ, ಸೃಷ್ಠಿಕರ್ತ ಪರಮಾತ್ಮನಿಗೆ ಬಿಟ್ಟರೇ, ಪರಮಾತ್ಮನ ಸ್ವರೂಪಿಯಾದ ಭಕ್ತರಿಗೆ ಮಾತ್ರ ಉಚ್ಛಾಟನೆ ಮಾಡುವ ಅಧಿಕಾರ ಇದೆ. ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ, ಪೀಠಕ್ಕೂ ಟ್ರಸ್ಟ್ ಗೂ ಯಾವುದೇ ಸಂಬಂಧ ಇಲ್ಲ. ಪೀಠವನ್ನ ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ ಎಂದರು.