ಬೆಳಗಾವಿ ನಗರದಲ್ಲಿ ಶನಿವಾರ ಗಣೇಶ ವಿಸರ್ಜನೆ ಇರುವ ಹಿನ್ನಲೆ ಗಣೇಶ ವಿಸರ್ಜನೆಗೆ ಹೋಗುವ ಮಾರ್ಗವನ್ನ ಗುರುತಿಸಿದ್ದು ನಗರದ ಚೆನ್ನಮ್ಮ ವೃತ್ತದಿಂದ ಕಾಕತಿ ವೇಸ್ ರಸ್ತೆ, ಕಾಲೇಜ್ ರಸ್ತೆ,ಪಿಂಪಳ ಕಟ್ಟಾ ಮುಂತಾದ ಕಡೆಗಳಿಂದ ಬಂದ ಗಣೇಶ ಮೂರ್ತಿಗಳ ರೂಪಕ ವಾಹನಗಳ ಮುಖ್ಯ ಮೆರವಣಿಗೆಯು ನರಗುಂದಕರ ಭಾವೆ ಚೌಕದಿಂದ ಪ್ರಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ,ರಾಮದೇವ ಗಲ್ಲಿ,ಸಮಾದೇವಿ ಗಲ್ಲಿ,ಎನ್. ಡಿ,ಧರ್ಮವೀರ ಸಂಭಾಜಿ ಚೌಕ, ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಲಾನಿ ಚೌಕ,ಶನಿಮಂದಿರ,ಕಪಿಲೇಶ್ವರ ಫೈ ಓವರ ರಸ್ತೆ,ರೇಣುಕಾ ಹೊಟೇಲ್ ಕ್ರಾಸ್ ಮೂಲಕ ಕಪಿಲೇಶ್ವರ ಹೊಂಡಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಗುರುವಾರ 7 ಗಂಟೆಗೆ ಪೊಲೀಸ್ ಆಯುಕ್ತ ಭೂಷನ್ ಬೊರಸೆ ಪತ್ರಿಕಾ ಪ್ರಕಟಣೆ ಮೂಲಕ ಆದೇಶ ಹೊರಡಿಸಿದ್ದಾರೆ.