ಅಂಬಲಪಾಡಿ ಆಬ್ಕೊ ಸ್ಟೀಲ್ ಬಳಿ ಯುವಕನೋರ್ವ ಹಠಾತ್ತನೆ ಕುಸಿದು ಬಿದ್ದಿದ್ದು ರಕ್ಷಣೆಗೆ ಅಂಗಲಾಚುತ್ತಿದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿ ಆಬ್ಕೊ ಸ್ಟೀಲಿನ ಸಿಬ್ಬಂದಿಗಳ ಸಹಾಯದಿಂದ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕ ದೇವರಾಜ್ (28) ಹಾಸನ ಮೂಲದವನಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ದಾಖಲು ಸಮಯ ಯುವಕನ ದೇಹದಲ್ಲಿ ಸಕ್ಕರೆ ಅಂಶ ಸಂಪೂರ್ಣ ಕುಸಿದಿದ್ದು ಅಪಾಯದ ಅಂಚಿನಲ್ಲಿದ್ದ. ಸಂಬಂಧಪಟ್ಟವರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ಕೋರಿಲಾಗಿದೆ.