ಬೀದರ್ ಕ್ಷೇತ್ರವನ್ನು ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ (PMDDKY) ಸೇರಿಸುವಂತೆ ಸಂಸದ ಸಾಗರ ಖಂಡ್ರೆ ಮನವಿ. ನವದೆಹಲಿ: ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಸಾಗರ ಖಂಡ್ರೆ ಅವರು ಸಂಸತ್ ಕಚೇರಿಯಲ್ಲಿ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ಬೀದರ್ ಜಿಲ್ಲೆಯನ್ನು ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ (PMDDKY) ಸೇರಿಸುವಂತೆ ಮನವಿ ಪತ್ರ ಹಾಗೂ ವಿವರವಾದ ವರದಿಯನ್ನು ಸಲ್ಲಿಸಿದರು. ಈ ಯೋಜನೆಯಡಿಯಲ್ಲಿ ದೇಶದ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಆರು ವರ್ಷಗಳ ಕಾಲ ಪ್ರತಿ ವರ್ಷ ₹24,000 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು