ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು ಯಾದಗಿರಿ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶೋಭಾಯಾತ್ರೆ ಕಾರ್ಯಕ್ರಮ ಜರಗಿತು. ಭಾರತೀಯ ಮುಸ್ಲಿಂ ಸಹೋದರರು ತಮ್ಮ ಶೋಭಾ ಯಾತ್ರೆಯಲ್ಲಿ ನಗರದ ಮೈಲಾಪುರ ಅಗಸಿ ವೃತ್ತದಲ್ಲಿ ಶ್ರೀ ಗೌರಿ ಗಣೇಶ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾದ ಶ್ರೀ ಪಂಡರಾಪುರ ವಿಠಲನ ಅವತಾರಿ ಶ್ರೀ ಗಜಾನನಿಗೆ ಶೋಭಾಯಾತ್ರೆಯಲ್ಲಿ ಗಣೇಶನ ಭಕ್ತಿ ಪ್ರಧಾನ ಹಾಡು ಹಾಕಿ ತಾವೆಲ್ಲರೂ ನೃತ್ಯ ಮಾಡುವುದರ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು. ಶೋಭಾಯಾತ್ರೆಯಲ್ಲಿ ನೂರಾರು ಜನ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು