ಮಹಮ್ಮದ್ ಪೈಗಂಬರ್ ಅವರು ಸಾರಿದ ಶಾಂತಿ ಸೌಹಾರ್ದ ಮಂತ್ರ ನಮಗೆ ಇಂದಿಗೂ ಪ್ರೇರಣೆ ಎಂದು ಕೊಪ್ಪಳ ಜಿಲ್ಲೆಯ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಹೇಳಿದ್ದಾರೆ. ಸೆಪ್ಟೆಂಬರ್ 05 ರಂದು ಸಂಜೆ 6-00 ಗಂಟೆಗೆ ಕೊಪ್ಪಳ ನಗರದಲ್ಲಿ ನಡೆದ ಮಹಮ್ಮದ್ ಪೈಗಂಬರ್ ಅವರ ಜಯಂತಿ ನಿಮಿತ್ತ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮ ಗುರು ಮುಫ್ತಿ ನಜೀರ ಅಹಮದ್ ತಸ್ಕೀನ ಕೊಪ್ಪಳ ನಗರದ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಅಮರೇಶ ಕರಡಿ ಸೇರಿದಂತೆ ಸಾಧಕರು ಸಮಾಜ ಸೇವಕರು ಉಪಸ್ಥಿತರಿದ್ದರು