ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಎಲ್ಲಾ ಘಟನೆ ನಡೆಯುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಬಿಜೆಪಿಯ ಚಡ್ಡಿಗಳು ಮಾಡುವ ಕುತಂತ್ರ ಅಂತ ಅವರಾಗಿಯೇ ಅವ್ರು ಹೇಳ್ತಿದ್ದಾರೆ. ಅದೇ ಬಿಜೆಪಿ ಇದ್ದಾಗ ಇದೆಲ್ಲ ಯಾಕ್ ಆಗಲ್ಲ.? ವಿರೋಧ ಪಕ್ಷ ಕಾಂಗ್ರೆಸ್ ಆವಾಗ ಮತಯಾಚನೆಗಾಗಿ ಧರ್ಮ ಜಾತಿ ಅಥವಾ ಭಾಷೆಯನ್ನು ಉಪಯೋಗ ಮಾಡಿಕೊಳ್ಳಲ್ಲ. ಜನರಿಗೆ ಅದರಲ್ಲೂ ಬಡವರಿಗೆ ಅನುಕೂಲ ಕಾರ್ಯಕ್ರಮ ಚರ್ಚೆ ಮಾಡ್ತೀವಿ. ನಮ್ಮ ಸರ್ಕಾರ ಬಂದಾಗ್ಲಿಂದಲೂ ಇಲ್ಲಿಯವರೆಗೆ ಬಿಜೆಪಿ ಬಡವರು, ರೈತರು, ಕಾರ್ಮಿಕರ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಏನಾದರೂ ಚರ್ಚೆ ಮಾಡಿದ್ದಾರಾ ?