87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನ "ಬೆಲ್ಲದಾರತಿ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಜರುಗಿತು. ಕಾರ್ಯಕ್ರಮವನ್ನು ಸಮ್ಮೇಳನಾಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಉದ್ಘಾಟಿಸಿ ಮಾತನಾಡಿದರು. ಮಂಡ್ಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ವಿಶಿಷ್ಟವಾದ ಜಿಲ್ಲೆ ಎಂದು ಬಣ್ಣಿಸಿದರು. ಕಸಾಪ ರಾಜ್ಯ ಸಮಿತಿ ಕುರಿತು ಬಂದಿರುವ ದೂರುಗಳ ಕುರಿತು ಬೇಸರ ವ್ಯಕ್ತಪಡಿಸಿದ ಅವರು ಶೀಘ್ರ ವಿವಾದಗಳಿಂದ ಕಸಾಪ ಹೊರ ಬರಲೆಂದು ಹಾರೈಸಿದರು. ಇದೇ ವೇಳೆ ಬೆಲ್ಲದಾರತಿ ಸಂಚಿಕೆಯನ್ನು ವಿಶೇಷವಾಗಿ ಮೆರವಣಿಗೆ ಮೂಲಕ ತಂದು ಗಣ್ಯರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬೆಲ್ಲದಾರತಿ ಸಂಚಿಕೆ ಸಂಪಾದಕೀಯ ಮಂಡಳಿ ಸದಸ್ಯರನ್ನು ಅಭಿನಂದಿಸಲಾಯಿತು.