ಆಗಸ್ಟ್ 31 ಸಂಜೆ 4 ಗಂಟೆಯ ಸುಮಾರಿಗೆ ಸರ್ಕಾರ ಜನ ಸಾಮಾನ್ಯರಿಗೆ ಬಿಗ್ ಶಾಕ್ ಕೊಟ್ಟಿದೆ. ಆಸ್ತಿ ನೋಂದಣಿ ಶುಲ್ಕ ಡಬಲ್ ಮಾಡಿ ಆದೇಶ ಹೊರಡಿಸಿದೆ. ಬೆಲೆ ಏರಿಕೆಯಿಂದ ಬಸವಳಿದು ಹೋಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇನ್ಮುಂದೆ ಶೇಕಡಾ 7.6ರಷ್ಟು ನೋಂದಣಿ & ಮುದ್ರಾಂಕ ಶುಲ್ಕ ಪಾವತಿಸುವ ಪರಿಸ್ಥಿತಿ ಎದುರಾಗಿದ್ದು ಬೆಂಗಳೂರಿನಂಥ ಮಹಾನಗರಿಯಲ್ಲಿ ಎಲ್ಲವೂ ದುಬಾರಿಯಾಗಿದ್ದು ಈ ಮಧ್ಯೆ ನೋಂದಣಿ & ಮುದ್ರಾಂಕ ಶುಲ್ಕವು ಡಬಲ್ ರೇಟ್ ಆಗಿದ್ದು ಜನರ ಕಣ್ಣು ಕೆಂಪು ಮಾಡಿದೆ.