ಸ್ಮಶಾನ ಮರು ಸರ್ವೇ ಮಾಡುವವರೆಗೂ ಯಥಾಸ್ಥಿತಿ ಕಾಪಾಡಲು ಪಿಎಸೈ ಗುರುರಾಜ್ ಆದೇಶ ಸಾರ್ವಜನಿಕರ ಸ್ಮಶಾನ ಒತ್ತುವರಿ ಪ್ರಶ್ನಿಸಿದ ಗ್ರಾಮ ಪಂಚಾಯಿತಿ ಸದಸ್ಯ ಬೊಮ್ಮಾಂಡಹಳ್ಳಿ ಸುಭ್ರಮಣಿ ಮೇಲೆ ನಿವೃತ್ತ ಪೊಲೀಸ್ ಅಧಿಕಾರಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ ಹಾಗೂ ಪಿಎಸೈ ಗುರುರಾಜ್ ನೇತೃತ್ವದಲ್ಲಿ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಮರು ಸರ್ವೇ ಮಾಡುವವರೆ ಯಥಾಸ್ಥಿತಿ ಕಾಪಾಡುವಂತೆ ಒತ್ತುವರಿಗೆ ಯತ್ನಿಸಿದ ಮುನಿಯಪ್ಪ ಹಾಗೂ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಪಟ್ಟಣದ ಬಳಿಯ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಬಳಿಯ ಬೊಮ್ಮಾಂಡಹಳ್ಳಿಯ ಸರ್ವೇ ನಂಬರ್ ೬೩ರಲ್ಲಿ ಸ್ಮಶಾನಕ್ಕೆ ೩೦ ಗುಂಟೆ ಜಮೀನು ಮಂಜ