ಬಂಗಾರು ತಿರುಪತಿಯಲ್ಲಿ ಯಾತ್ರಾ ನಿವಾಸಿ ಕಟ್ಟಡ ಲೋಕಾರ್ಪಣೆ ಗ್ರಾಮದ ಸಮೀಪದ ಗುಟ್ಟಹಳ್ಳಿ ಬಂಗಾರು ತಿರುಪತಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಯಾತ್ರಾ ನಿವಾಸಿ ಕಟ್ಟಡವನ್ನು ಶಾಸಕಿ ರೂಪಕಲಾ ಶಶಿಧರ್ ಶನಿವಾರ ಲೋಕಾರ್ಪಣೆ ಮಾಡಿ ಮಾತನಾಡಿದರು. ಬಂಗಾರ ತಿರುಪತಿ ದೇಗುಲಕ್ಕೆ ಕರ್ನಾಟಕ, ಆಂಧ್ರ ಪ್ರದೇಶ್ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಬರುವ ದೃಷ್ಟಿಯಿಂದ ಭಕ್ತರು ವಿಶ್ರಾಂತಿ ಪಡೆಯಲು ಪ್ರವಾಸೋದ್ಯಮ ಇಲಾಖೆಯ ಅನುದಾನವನ್ನು ಬಳಸಿಕೊಂಡು ೮ ಕೊಠಡಿಗಳ ಕಟ್ಟಡವನ್ನು ೭೦ ಲಕ್ಷದಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಇನ್ನು ೧೦ ರಿಂದ ೧೫