ಕಾವೇರಿ ನಿವಾಸದಲ್ಲಿ ಬುಧವಾರ ಬೆಳಗ್ಗೆ 11:30 ರ ಸುಮಾರಿಗೆ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕುರಿತು ಹಾಗೂ ವಿಷ್ಣುವರ್ಧನ್ ಸಮಾಧಿ ಕುರಿತು ಸಿಎಂ ಜೊತೆ ಮಾತನಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು, ಸಿಎಂ ರನ್ನ ಭೇಟಿ ಮಾಡಿದ್ದು, ಅಭಿಮಾನಿಗಳಿಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ರವರ ಸ್ಮಾರಕಕ್ಕೆ ಜಾಗ ಕೇಳಿದ್ದೇವೆ. ಅದಕ್ಕೆ ಸಿಎಂ ಸರಿ ಎಂದಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳ್ತೇನೆ. ಕರ್ನಾಟಕ ರತ್ನ ಕೊಡಿ ಎಂದು ನಾನು ಕೇಳಲ್ಲ, ಆದರೆ ಅಭಿಮಾನಿಗಳು ಕೇಳ್ತಿದ್ದಾರೆ ಅವರಿಗಾಗಿ ಕರ್ನಾಟಕ ರತ್ನ ಕೊಡಬೇಕು. ಅಭಿಮಾನಿಗಳು ಬಂದು ನಮಸ್ಕಾರ ಮಾಡಲು ಜಾಗಕ್ಕೆ ಅನುಮತಿ ಕೊಡಬೇಕು. 18ನೇ ತಾರೀಖಿನ ಒಳಗೆ ವಿಷ್ಣುರವರ ಹುಟ್ಟು ಹಬ್ಬ ಇದೇ.